#Discover the Fun!

Upcoming Events

ಶ್ರೀಗಂಧ ಯುಗಾದಿ ಸಂಭ್ರಮ - 2025

Book your tickets below
Event Image
Event Image
about image
about image
about image
shape
About Us

ಶ್ರೀಗಂಧ ಇತಿಹಾಸ

ಸಾವಿರಾರು ಮೈಲಿ ದೂರದ ಯೂರೋಪಿಗೆ ಬಂದ ನಮಗೆ ನಮ್ಮವರ ಜೊತೆ ನಮ್ಮ ಭಾಷೆ ಮಾತನಾಡೋ ಬಯಕೆ ಸದಾ ಕಾಡುತ್ತಿರುತ್ತದೆ. ಇದೇ ಕಾರಣದಿಂದ ೨೦೦೪ ರಲ್ಲಿ ನೆದರ್ಲ್ಯಾಂಡ್ಸ್ ನಲ್ಲಿ ಅಂದು ನೆಲೆಸಿದ್ದ ಕೆಲವೇ ಕೆಲವು ಕುಟುಂಬಗಳು ಸೇರಿ ಬಿತ್ತಿದ “ಶ್ರೀಗಂಧ” ಎಂಬ ಸಣ್ಣ ಸಂಘಟನೆ ಇಂದು ನೆದರ್ಲ್ಯಾಂಡ್ಸ್ ಉದ್ದಗಲಕ್ಕೂ ಹರಡಿ ಹೆಮ್ಮರವಾಗಿದೆ. ಪ್ರತಿ ವರ್ಷವೂ ಯುಗಾದಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಸತತವಾಗಿ ಮಾಡುತ್ತಾ ಬಂದಿರುವ ಶ್ರೀಗಂಧ ಇಂದು ವರುಷಕ್ಕೆ ಸುಮಾರು ಒಂದು ಸಾವಿರ ಕನ್ನಡಿಗರನ್ನು ಈ ಕಾರ್ಯಕ್ರಮಗಳಲ್ಲಿ ಒಂದು ಗೂಡಿಸುತ್ತಾ ಡಚ್ ನೆಲದಲ್ಲಿ ಕನ್ನಡದ ಕಂಪನ್ನು ಹರಡುತ್ತಾ ಬಂದಿದೆ. ಇಲ್ಲಿಯ ಸ್ಥಳೀಯ ಕಲಾವಿದರನ್ನು ಉತ್ತೇಜಿಸುತ್ತಾ ಅವರಿಗೆ ವೇದಿಕೆಯನ್ನು ನೀಡುತ್ತಾ ಬಂದಿರುವುದಲ್ಲದೆ ಹೆಸರಾಂತ ಕಲಾವಿದರನ್ನು ಭಾರತದಿಂದ ಬರೆಮಾಡಿ ಮನರಂಜನೆ ಕೊಡುತ್ತಾ ಬಂದಿದೆ.

ಇದಲ್ಲದೆ, ನೆದರ್ಲ್ಯಾಂಡ್ಸ್ ನ ಭಾರತದ ರಾಯಭಾರಿ ಕಚೇರಿ ಮತ್ತು ಬೇರೆ ಸಂಘಟನೆಗಳೊಡನೆ ಸೇರಿ ಹಲವಾರು ಉಪಯುಕ್ತ ಕಾರ್ಯಕ್ರಮಗಳಲ್ಲಿ ಕೈಗೂಡಿಸಿದೆ. ಇದೆ ರೀತಿ ಮುಂಬರುವ ದಿನಗಳಲ್ಲಿ ಯುರೋಪ್ ನ ಬೇರೆ ಸಂಘಟನೆಗಳೊಡನೆ ಸೇರಿ ಮತ್ತೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಯೋಚನೆಯಲ್ಲಿದೆ. ಶ್ರೀಗಂಧದ ಮತ್ತು ಕನ್ನಡದ ಕಂಪನ್ನು ಮತ್ತೂ ಹೆಚ್ಚು ಪಸರಿಸುವ ಹಂಬಲದಲ್ಲಿದೆ.

Read More
Mission

ಧ್ಯೇಯೋದ್ದೇಶಗಳು

ಶ್ರೀಗಂಧವು ಹಾಲೆಂಡ್ ನಲ್ಲಿ (ನೆದರ್ಲ್ಯಾಂಡ್ಸ್ ನಲ್ಲಿ) ನೆಲೆಸಿರುವ, ಬಂದು ನೆಲೆಸುವ ಎಲ್ಲ ಕನ್ನಡಿಗರನ್ನು ಬೆಸೆಯುವ ವೇದಿಕೆ.

ನೆದರ್ಲ್ಯಾಂಡ್ಸ್ ಗೆ ಬರುವ ಎಲ್ಲ ಕನ್ನಡ ಬಂಧುಗಳಿಗೂ ವಾಸ್ತವ್ಯ ಅನುಕೂಲವಾಗಲು ಸಹಾಯ ಮಾಡುವುದು. ನೆದರ್ಲ್ಯಾಂಡ್ಸ್ ನ ಕನ್ನಡಿಗರಿಗೆ ಕನ್ನಡಿಗರೊಡನೆ ಒಡನಾಡಲು, ತಮ್ಮ ಕನ್ನಡತನವನ್ನು ತೋರಲು ಅನುಕೂಲಕರ ವಾತಾವರಣವನ್ನು ಮತ್ತು ಅವಕಾಶಗಳನ್ನು ನಿರ್ಮಿಸುವುದು. ಇಂದಿನ ಮತ್ತು ಮುಂದಿನ ಕನ್ನಡಿಗರಿಗಾಗಿ ಕನ್ನಡ ಬೆಳೆಸಲು, ಬಳಸಲು, ಉಳಿಸಲು ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ಭಾಗವಹಿಸುವುದು. ಇತರ ಕನ್ನಡ ಸಂಘಗಳೊಡನೆ ಕೂಡಿ ಸಾಧ್ಯವಾಗುವ ಇನ್ನಿತರ ಕಾರ್ಯಗಳ ಮೂಲಕ ಕನ್ನಡದ ಔನ್ನತ್ಯಕ್ಕೆ ನಮ್ಮ ಸೇವೆಯನ್ನು ಮಾಡುವುದು.

Read More