Facebook

ಶ್ರೀಗಂಧ ಪುರಾಣ………….

ಶ್ರೀಗಂಧ – ಹಾಲೆಂಡ್ ಕನ್ನಡ ಬಳಗ ಸ್ಥಾಪನೆಯಾಗಿದ್ದು ಅಕ್ಟೋಬರ್ ೨೦೦೪ ರಲ್ಲಿ. ಇದರ ಮೊದಲು ಹಾಲೆಂಡ್ ದೇಶದಲ್ಲಿರುವ ಕೆಲವು ಕನ್ನಡಿಗರು ಹಬ್ಬ ಹರಿದಿನಗಳನ್ನು ಒಟ್ಟಿಗೆ ಆಚರಿಸುತ್ತಾ ಇದ್ದರು. ಎಲ್ಲರು ಬೇರೆ ಬೇರೆ ಪ್ರಾಂತ್ಯಗಳಲ್ಲಿದ್ದಿದ್ದರಿಂದ ಒಬ್ಬರ ಪರಿಚಯ ಇನ್ನೊಬ್ಬರಿಗಿರುತ್ತಲಿಲ್ಲ. ಹೀಗೆಯೇ ಒಮ್ಮೆ ನೆರವಾಸಿ ಕನ್ನಡಿಗರ ಬಗ್ಗೆ ಮಾತನಾಡುತ್ತಿದ್ದು ಕನ್ನಡ ಸಂಘವನ್ನೇಕೆ ಮಾಡಬಾರದೆಂಬ ಯೋಚನೆಯು ಮೂಡಿತು. ಹಾಲೆಂಡ್ ದೇಶದ ಎಲ್ಲ ಕನ್ನಡಿಗರೂ ಒಟ್ಟುಗೂಡಿ ಹಬ್ಬ ಹರಿದಿನಗಳಲ್ಲದೆ ಸಾಂಸ್ಕ್ರತಿಕ ಹಾಗೂ ಕ್ರೀಡಾ ಚಟುವಳಿಕೆಗಳನ್ನು ಒಂದಾಗಿ ಆಚರಿಸುವ ಸೌಲಬ್ಯವನ್ನು ಒದಗಿಸುವ ಮಾಧ್ಯಮವೇ ಈ ಶ್ರೀಗಂಧ. ದಿನೇ ದಿನೇ ಶ್ರೀಗಂಧದ ಸುವಾಸನೆ ಹಾಲೆಂಡ್ ದೇಶದಲ್ಲಿರುವ ಎಲ್ಲಾ ಪ್ರಾಂತ್ಯಗಳಲ್ಲದೆ ಹೊರದೇಶಗಳಲ್ಲೂ ಹರಡುತ್ತಿದೆ.

ಧ್ಯೇಯೋದ್ದೇಶಗಳು (Mission)

ಶ್ರೀಗಂಧವು ಹಾಲಂಡಿನಲ್ಲಿ (ನೆದರ್ಲ್ಯಾಂಡ್ಸ್) ನೆಲೆಸಿರುವ, ಬಂದು ನೆಲೆಸುವ ಎಲ್ಲ ಕನ್ನಡಿಗರನ್ನು ಬೆಸೆಯುವ ವೇದಿಕೆ. ಹಾಲಂಡಿಗೆ ಬರುವ ಎಲ್ಲ ಕನ್ನಡ ಬಂಧುಗಳಿಗೂ ವಾಸ್ತವ್ಯ ಅನುಕುಲವಾಗಲು ಸಹಾಯ ಮಾದುವುದು.

ಹಾಲಂಡಿನ ಕನ್ನಡಿಗರಿಗೆ ಕನ್ನಡಿಗರೊಡನೆ ಒಡನಾಡಲು, ತಮ್ಮ ಕನ್ನಡತನವನ್ನು ತೋರಲು ಅನುಕೂಲಕರ ವಾತಾವರಣವನ್ನು ಮತ್ತು ಅವಕಾಶಗಳನ್ನು ನಿರ್ಮಿಸುವುದು. ಇಂದಿನ ಮತ್ತು ಮುಂದಿನ ಕನ್ನಡಿಗರಿಗಾಗಿ ಕನ್ನಡ ಬೆಳೆಸಲು, ಬಳಸಲು, ಉಳಿಸಲು ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ಭಾಗವಹಿಸುವುದು.

ಇತರ ಕನ್ನಡ ಸಂಘಗೊಳೊಡನೆ ಕೂಡಿ ಸಾಧ್ಯವಾಗುವ ಇನ್ನಿತರ ಕಾರ್ಯಗಳ ಮೂಲಕ ಕನ್ನಡದ ಔನ್ನತ್ಯಕ್ಕೆ ನಮ್ಮ ಸೇವೆಯನ್ನು ಮಾಡುವುದು.

ಕನಸು (Vision)

ಶೀಗಂಧ ಕನ್ನಡ ಸಂಘವು ತನ್ನ ಚಟುವಟಿಕೆಗಳ ಮೂಲಕ ಹಾಲಂಡಿನ ಕನ್ನಡಿಗರಿಗೆ ಕನ್ನಡದ ಕಂಪನ್ನು ಬೀರುವುದು ಹಾಗೂ ಆ ಕಂಪು ಹೆಚ್ಚು ಗಾಢವಾಗುತ್ತಾ ಪ್ರಪಂಚದೆಲ್ಲೆಡೆ ಪಸರಿಸುವಂತೆ, ಕರ್ನಾಟಕ ತನ್ನ ಗತ ವೈಭವವನ್ನು ಮತ್ತೆ ಮರಳಿ ಮೆರೆಯುವಂತೆ ಮಾಡುವುದು.